ಕೃತಿಗಳು
ಗಮಕಿ ಶಂಕರ ನಾರಾಯಣ ಅವರ ಕೃತಿಗಳನ್ನು ಡಿಜಿಟಲೀಕರಿಸಲಾಗಿದೆ
ಈ ಕೃತಿಗಳನ್ನು ವಾಣಿಜ್ಯೇತರ ಉದ್ದೇಶಗಳಿಗೆ ಮುಕ್ತವಾಗಿ ಬಳಸಬಹುದಾಗಿದೆ.
ಸಂಚಯ ಹಾಗೂ ಸಂಚಿ ಫೌಂಡೇಶನ್ ಸಹಯೋಗದೊಂದಿಗೆ ಈ ಕೃತಿಗಳನ್ನು ಡಿಜಿಟಲೀಕರಿಸಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲಾಗಿದೆ. ಈ ಕೃತಿಗಳು ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್ ಅಡಿಯಲ್ಲಿವೆ. ಹೆಚ್ಚಿನ ಮಾಹಿತಿಗೆ ನಮ್ಮನ್ನು ಸಂಪರ್ಕಿಸಿ.
ಪರವಾನಗಿ: CC-by-SA-NC
ಕೃತಿ ಪರಿಚಯ ಮತ್ತು ಓದು…
ತುಳಸೀ ಬಿಲ್ವ
ವಿವಿಧ ಕೃತಿಕಾರರ ಕವನ ಪುಷ್ಪಗಳು
ಚಿತ್ರ ಪಲ್ಲವ
ವಿವಿಧ ಕವಿಗಳ ಕವನ ಸಂಚಯ
ಸೀತಾ ದರ್ಶನಂ
ಮಹಾಮಾತೆ ಸೀತಾದೇವಿಯೇ ಕಥಾನಾಯಿಕಿಯಾಗುಳ್ಳ, ರಾಮಾಯಣ ಕಥಾಂತರ್ಗತವಾಗಿ ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿರುವ 1600 ಪದ್ಯಗಳ ಬೃಹತ್ ಕಾವ್ಯ...
ಪಾವನೋಪನಯನ
ತ್ರಿವರ್ಣ ವಟುವಿಗೆ ಮಾಡತಕ್ಕ ಷೋಡಶ ಸಂಸ್ಕಾರಗಳಲ್ಲಿ, ಉಪನಯನವು ಶ್ರೇಷ್ಠವೂ ಮೌಲಿಕವಾದುದು. ಈ ಸಂಸ್ಕಾರದ ಸಾರ ಈ ಕೃತಿಯಲ್ಲಿ...
ಭಕ್ತಿ ಕುಸುಮಾಂಜಲಿ
ವಿವಿಧ ದೇವ - ದೇವತೆಗಳ ಕುರಿತ ಮೂಲ ಸಂಸ್ಕೃತ ಶ್ಲೋಕಗಳ ಕನ್ನಡ ಅನುವಾದ. ನಿತ್ಯ ಪಾರಾಯಣಕ್ಕೆ ಯೋಗ್ಯವಾದದ್ದು.
ಪರಿಣಯ ಪ್ರಬಂಧ
ವಿವಾಹ ಕರ್ಮದ ಅರ್ಥ ಹಾಗೂ ಪರಂಪರೆಯಿಂದ ಬಂದ ಸಂಪ್ರದಾಯವನ್ನು ಸೋದಾಹರಣದಿಂದ ನಿರೂಪಿಸಲಾಗಿದೆ. ಅಲ್ಲದೇ ವಿವಾಹದ ಪಾವಿತ್ರ್ಯವನ್ನೂ, ಮಹತ್ವವನ್ನೂ...
ಸಾಹಿತ್ಯದ ಚತುರ್ಮುಖರು
ಪ್ರಕಟಣೆ 1993 ಕಾವ್ಯ ಪ್ರಪಂಚದಲ್ಲಿ ಕವಿ, ಗಮಕಿ, ವಾದಿ, ವಾಗ್ಮಿಗಳ ಪಾತ್ರವನ್ನು ವಿಮರ್ಶಾತ್ಮಕವಾಗಿ ವಿವರಣಾತ್ಮಕವಾಗಿ ಕಟ್ಟಿಕೊಡಲಾಗಿದೆ. ಶಂಕರನಾರಾಯಣ್ ಅವರು ಕವಿ-ಗಮಕಿಗಳ ಪಾತ್ರವನ್ನು ನಿರೂಪಿಸಿದ್ದರೆ, ವಿದ್ವಾನ್ ರಂಗನಾಥ ಶರ್ಮರು ವಾದಿ-ವಾಗ್ಮಿಗಳ ಪಾತ್ರವನ್ನು ನಿರೂಪಿಸಿದ್ದಾರೆ...
ದಿವ್ಯೋಪದೇಶ
ಪ್ರಕಟಣೆ 1989, 1992, 2003 ಶ್ರೀ ಕಾಂಚಿ ಪರಮಾಚಾರ್ಯರ ಉಪನ್ಯಾಸಮಾಲೆಗಳ, ಕನ್ನಡ ಮತ್ತು ಇಂಗ್ಲಿಷ್ ಅನುವಾದ.
ಆದಿತ್ಯ ಹೃದಯ
ಪ್ರಕಟಣೆ 1991 ರಾಮಾಯಣದಲ್ಲಿ ಬರುವ ಮೂಲ ಶ್ಲೋಕಗಳ ಕನ್ನಡ ಅನುವಾದ, ಮೂಲ ಸಂಸ್ಕೃತದಲ್ಲಿ ಈ ಶ್ಲೋಕ ಅನುಷ್ಟುಪ್ ಛಂದಸ್ಸಿನಲ್ಲಿದೆ. ಇದರ ಕನ್ನಡ ಅನುವಾದ ಮಲ್ಲಿಕಾಮಾಲಾ ವೃತ್ತದಲ್ಲಿ ರಚಿಸಲಾಗಿದ್ದು, ವಿಭಿನ್ನ ರಾಗಗಳಲ್ಲಿ ಹಾಡಲು ಹಾಗೂ ಸುಲಭವಾಗಿ ಗ್ರಹಿಸಲು...
ಭೀಮಸೇನ ವಿಜಯ
ಪ್ರಕಟಣೆ 1998 ಇದೊಂದು ಮಹಾಕಾವ್ಯ. ಸುಮಾರು 1006 ಪದ್ಯಗಳ ಬೃಹತ್ ಗ್ರಂಥ; ವಾರ್ಧಕ ಷಟ್ಪದಿಯಲ್ಲಿ ಸೃಜಿಸಲಾಗಿದೆ. ಭೀಮನ ಸಾಹಸಗಳನ್ನು, ಅವನ ಉನ್ನತ ಹಾಗು ವಿಶಿಷ್ಟ ವ್ಯಕ್ತಿತ್ವವನ್ನು ರಂಜನೀಯವಾಗಿ...
ಸೌಂದರ್ಯ ಲಹರಿ ಮತ್ತು ಕನಕಧಾರಾ ಸ್ತೋತ್ರ
ಪ್ರಕಟಣೆ 1997 ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರರೂಪದ ಶ್ಲೋಕಗಳ ಅನುವಾದ. ಕನ್ನಡ ಸ್ತೋತ್ರ ಪರಂಪರೆಗೆ ಒಂದು ಉತ್ಕೃಷ್ಟ ಕಾಣಿಕೆ...
ಹೈಮವತಿ ಪರಿಣಯ
ಪ್ರಕಟಣೆ 1995 ಹರಿಹರನ ಗಿರಿಜಾ ಕಲ್ಯಾಣದ ಪ್ರಭಾವದಿಂದ, ಈ ಕಾವ್ಯವನ್ನು ವಾರ್ಧಕ ಷಟ್ಪದಿಯಲ್ಲಿ ರಚಿಸಲಾಗಿದೆ. ಈ ಕಾವ್ಯ ಭಕ್ತಿ ಪ್ರಧಾನ , ಪೌರಾಣಿಕ ಮತ್ತು ಲೌಕಿಕವೂ...
ಶಂಕರ ಬೋಧಾಮೃತ
ಪ್ರಕಟಣೆ 1994 (ಶ್ರೀ ಶಿವಾನಂದ ಲಹರಿ - ಮೋಹಮುದ್ಗರ ) ಶ್ರೀ ಶಂಕರಾಚಾರ್ಯ ವಿರಚಿತ ಸಂಸ್ಕೃತ ಸ್ತೋತ್ರ ಲಹರಿಯನ್ನು ಕನ್ನಡ ವಾರ್ಧಕ ಷಟ್ಪದಿಯಲ್ಲಿ ರಚಿಸಲಾಗಿದೆ. ಸರಳವಾದ ಶೈಲಿ - ಉನ್ನತ ಮಟ್ಟದ ಭಾವನೆಗಳ ಸ್ತೋತ್ರ ಪಾಠ...
ಶ್ರೀ ಯಾಜ್ಞವಲ್ಕ್ಯ ಚರಿತಾಮೃತ
ಪ್ರಕಟಣೆ 1992 ಶ್ರೀ ಯಾಜ್ಞವಲ್ಕ್ಯರು ವೇದವ್ಯಾಸರ ಸಮಾನರು. ಯಜುರ್ವೇದವನ್ನು ರಚಿಸಿದರು ಎಂಬ ನಂಬಿಕೆ. ಅವರ ಜೀವನವನ್ನು ಪದ್ಯರೂಪದಲ್ಲಿ ರಚಿಸಿ ಗಮಕದ ಧಾಟಿಯಲ್ಲಿ ಪಠಿಸಲು ಸುಗಮವಾಗುವಂತೆ ವಾರ್ಧಕ ಛಂದಸ್ಸಿನಲ್ಲಿ ರಚಿಸಿರುವ...
ಶ್ರೀ ಅನಂತಪದ್ಮನಾಭ ಕಥಾಮೃತ
ಪ್ರಕಟಣೆ 1978; 1993 ನಮ್ಮಲ್ಲಿ ವಿಶೇಷವಾಗಿ ಅನಂತಪದ್ಮನಾಭ ವ್ರತವನ್ನು ಆಚರಿಸುವುದುಂಟು. ಆಗ ವ್ರತ ಕಥೆಯನ್ನು ಪೂಜಕರು ಕೇಳಬೇಕಾದ್ದು ಒಂದು ನಿಷ್ಠಾಕ್ರಮ. ಆ ದೇವರ ಮಹಿಮೆ, ಕಥಾ ವಿವರಣೆಯನ್ನು ಗಮಕ ಶೈಲಿಯಲ್ಲಿ ಕೇಳಿಸಲು ರಚಿತವಾದ...
ಶ್ರೀ ಕನ್ಯಕಾ ಪರಮೇಶ್ವರೀ ಚರಿತಾಮೃತ
ಪ್ರಕಟಣೆ 1981 ಶ್ರೀ ಕನ್ಯಕಾಪರಮೇಶ್ವರೀ ಚರಿತ್ರೆ ಕಥಾರೂಪದಲ್ಲಿ ಪದ್ಯಗಳಿಂದ ರಚಿತವಾದ ಕಥಾವಾಹಿನಿ. ಆಕೆಯ ಮಹಿಮೆ ಪುರಾಣಗಳನ್ನು ಗಮಕವಾಚನಕ್ಕೆ ಅಳವಡಿಸಿ ಭಕ್ತರಿಗೆ ಉಣಬಡಿಸಿದೆ...
ಶ್ರೀ ಸತ್ಯನಾರಾಯಣ ಕಥಾಮೃತ
ನಮ್ಮಲ್ಲಿ ರೂಢಿಯಲ್ಲಿರುವ ಸತ್ಯನಾರಾಯಣ ವ್ರತದ ಸಂಬಂಧದಲ್ಲಿ ಪಠಿಸುವ ವ್ರತಕಥೆಯ ಪದ್ಯರೂಪ . ಸುಮ್ಮನೆ ಶಾಸ್ತ್ರಕ್ಕೆ ಓದುವ ಕಥೆಯನ್ನು “ಗಮಕ” ಶೈಲಿಯಲ್ಲಿ ಓದಲು ಅನುಕೂಲವಾಗುವಂತೆ ಭಾಮಿನೀ ಷಟ್ಪದಿಯಲ್ಲಿ...